ಎ.ರಂಗನಾಥಪುರದಲ್ಲಿ ಪಾರಿವಾಳ ಹಿಡಿಯಲು ಹೋಗಿ ಪಾಳುಬಾಯಲ್ಲಿ ಬಿದ್ದು ಸಾವು

28-vij-1b-bavige biddu savu
Published on

ವಿಜಯಪುರ: ಪಟ್ಟಣ ಸಮೀಪದ ಎ.ರಂಗನಾಥಪುರದಲ್ಲಿ ಪಾರಿವಾಳ ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ಪಾಳು ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

ಪಿ. ರಂಗನಾಥಪುರದ ಮುನಿರಾಜು (35) ಮೃತ. ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಶವವನ್ನು ಬಾವಿಯಿಂದ ಮೇಲೆತ್ತಲಾಗಿದೆ.

120 ಅಡಿ ಆಳದ ಬಾವಿಯ ಸುತ್ತ ಸಾಕಷ್ಟು ಪಾರಿವಾಳಗಳು ವಾಸವಾಗಿದ್ದರಿಂದ ಅವುಗಳನ್ನು ಹಿಡಿಯಲು ಬುಧವಾರ ಸಂಜೆ ಸ್ನೇಹಿತನ ಜತೆ ತೆರಳಿದ್ದ. ಪಾರಿವಾಳ ಹಿಡಿಯುವ ಪ್ರಯತ್ನದಲ್ಲಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ.

ತಕ್ಷಣವೇ ಗ್ರಾಮಸ್ಥರನ್ನು ಬಂದರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬುಧವಾರ ಶವಕ್ಕಾಗಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಗುರುವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಿ, ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಹಸ್ತಾಂತರಿಸಲಾಯಿತು. ವಿಜಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net