

ಬೆಳಗಾವಿ: ತಾಲೂಕಿನ ದೇಸೂರ ಗ್ರಾಮದ ಸಮೀಪ ಚಲಿಸುವ ರೈಲಿನಿಂದ ಕೆಳಗೆ ಬಿದ್ದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.
ಬೆಳಗಾವಿ ಕಡೆಯಿಂದ ತಿರುಪಿ ಕಡೆಗೆ `ತಿರುಪತಿ ಹರಿಪ್ರಯಾ ಎಕ್ಸ್ಪ್ರೆಸ್ ರೈಲು' ವೇಗವಾಗಿ ಚಲಿಸುತ್ತಿರುವ ಸಂದರ್ಭದಲ್ಲಿ ಯುವತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಯುವತಿ ಯಾರೂ ಎಂಬುದು ಗೊತ್ತಾಗಿಲ್ಲ ಎಂದು ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.
--