ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಅಮಿತ್  ಓವುಳಕರ್

IMG-20230729-WA0034.jpg
Published on


ಬೆಳಗಾವಿ: ಇಲ್ಲಿನ ಸದಾಶಿವನಗರ್  ನಿವಾಸಿ ಹಾಗೂ ಸುಬಾಷ  ಫೋಟೊ ಸ್ಟುಡಿಯೋ ಮಾಲೀಕ  ಅಮಿತ್ ಆನಂದ್ ಓವುಳಕರ್ (51)ಶನಿವಾರ ನಿಧ‌ರಾದರು. ಮೃತರ ಅಂತಿಮ ಇಚ್ಚೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ನೇತ್ರ,ಚರ್ಮ ಹಾಗೂ ದೇಹದಾನ‌ ಮಾಡಿದರು.
ಅವರ ಕಣ್ಣುಗಳನ್ನು ಕೆಎಲ್‌ಇ ಡಾ.ಪ್ರಭಾಕರ ಕೋರೆ ನೇತ್ರ ಭಂಡಾರಕ್ಕೆ ನೀಡಿದ್ದಾರೆ.
ಚರ್ಮವನ್ನು  ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕೆಎಲ್‌ಇ ರೋಟರಿ ಸ್ಕೀನ್‌ಬ್ಯಾಂಕ್ ಚರ್ಮ ಭಂಡಾರಕ್ಕೆ ಚರ್ಮದಾನ ಮಾಡಿ ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖವಾಗಲು ಸಹಕರಿಸಿದ್ದಾರೆ.
ದೇಹವನ್ನು ಕೆಎಲ್‌ಇ ಶ್ರೀ ಬಿ.ಎಮ್.ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಔಲಕರ ಕುಟುಂಬದವರು ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net