

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಈರಮ್ಮ ಪತ್ರೆಮ್ಮನವರ (95) ಮೃತ ದುರ್ದೈವಿ.
ಬಿಟ್ಟು ಬಿಡದೇ ಮಳೆಯಿಂದ ನಾಲ್ಕು ದಿನಗಳ ಹಿಂದೆ ಕುಸಿದಿದ್ದ ಮನೆಯ ಮೇಲ್ಚಾವಣಿ ಘಟನೆಯಲ್ಲಿ ವೃದ್ಧೆ ಸೇರಿ 13 ಜನ ಕುಟುಂಬ ಸದಸ್ಯರಿಗೆ ಗಾಯಗೊಂಡಿದ್ದರು.ಗಂಭೀರ ಗಾಯಗೊಂಡಿದ್ದ ಈರಮ್ಮ ಪತ್ರೆಮ್ಮನವರ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.