ಹಾವು ಕಡಿತದಿಂದ ಹುರಳೀಕುಪ್ಪಿ ಕಾರ್ವಿುಕ ಸಾವು

29 svr 01
Published on

ಸವಣೂರ: ಹೊಲದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ವಿುಕ ಹಾವು ಕಡಿತದಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಗೇರಿ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಸವಣೂರ ತಾಲೂಕಿ ಹುರಳೀಕುಪ್ಪಿ ಗ್ರಾಮದ ನಿವಾಸಿ, ಕೂಲಿ ಕಾರ್ವಿುಕ ದುರಗಪ್ಪ ಸಿದ್ದಪ್ಪ ಸಿದ್ದಕ್ಕನವರ (49) ಹಾವು ಕಚ್ಚಿ ಮೃತಪಟ್ಟ ದುರ್ದೈವಿ. ದುರಗಪ್ಪ ಕೆಲಸ ಅರಸಿಕೊಂಡು ಗೋಪನಹಳ್ಳಿ ಗ್ರಾಮಕ್ಕೆ ತೆರಳಿ, ಕುಮಾರ ಎಂಬುವರ ಬಳಿ ಹಲವಾರು ದಿನಗಳಿಂದ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಹೊಲಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಾವು ಕಡಿತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಳ್ಳಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net