ನೇಣು ಬಿಗಿದುಕೊಂಡು ಸಾವು

suicide
Published on

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಶನಿವಾರ ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.


ಯಳಂದೂರು ತಾಲೂಕು ಹೊನ್ನೂರು ಸಮೀಪದ ಬೀಚಹಳ್ಳಿ ಗ್ರಾಮದ ನಿಂಗರಾಜು(42) ಮೃತರು. ಪತ್ನಿಯ ಊರಾದ ದೊಡ್ಡಿಂದುವಾಡಿ ಗ್ರಾಮದಲ್ಲೇ ಕುಟುಂಬ ಸಮೇತರಾಗಿ ವಾಸವಿದ್ದರು. ನಿತ್ಯ ಮದ್ಯ ಸೇವಿಸುತ್ತಿದ್ದರು. ಶನಿವಾರ ಬೀಚಹಳ್ಳಿಗೆ ಹೋಗುವುದಾಗಿ ಹೇಳಿ ಹೋದವನು. ದೊಡ್ಡಿಂದುವಾಡಿ ಗ್ರಾಮದ ಪಶು ಆಸ್ಪತ್ರೆ ಸಮೀಪದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net