ಜಾತ್ರೆಯಲ್ಲಿ ‘ಸಾವು ತಂದ ಸೌಭಾಗ್ಯ’ ಪ್ರದರ್ಶನ

24 GJD 2
Published on

ಗಜೇಂದ್ರಗಡ: ಸಮಾಜದ ಅಂಕು- ಡೊಂಕು ತಿದ್ದಿ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ ಪಾಟೀಲ ಹೇಳಿದರು.

ಪಟ್ಟಣದ ಹಿರೇದುರ್ಗಾದೇವಿ ಜಾತ್ರಾ ಮಹೋತ್ಸದಲ್ಲಿ ಭಾನುವಾರ ಭೋವಿ ಸಮಾಜ ಆಶ್ರಯದಲ್ಲಿ ಶ್ರೀ ದುರ್ಗಾದೇವಿ ನಾಟ್ಯ ಸಂಘದಿಂದ ‘ಸಾವು ತಂದ ಸೌಭಾಗ್ಯ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ಸಮಾಜದ ಪ್ರತಿಬಿಂಬ. ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೊರಿಸಲಾಗುತ್ತಿತ್ತು. ಕಾವ್ಯಕ್ಕಿಂತ ನಾಟಕವು ರಮ್ಯವಾಗಿರುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದೆ. ನಾಟಕದ ಕಲೆ ಉಳಿಸಬೇಕಾಗಿದೆ ಎಂದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ರಾಜು ಸಾಂಗ್ಲಿಕರ, ಮಂಜುಳಾ ರೇವಡಿ, ದುರಗಪ್ಪ ಮುಧೋಳ, ಸಿದ್ದಪ್ಪ ಚೋಳಿನ, ಯಲ್ಲಪ್ಪ ಬಂಕದ, ರಫೀಕ ತೋರಗಲ್ಲ, ಗುರು ಕಲ್ಲೊಡ್ಡರ, ಬಸಯ್ಯ ಗೊಂಗಡಶೆಟ್ಟಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net