ಇನ್ನು ಗ್ರಾಪಂಗಳಲ್ಲೇ ಜನನ, ಮರಣ ನೋಂದಣಿ

Birth death registration
Published on

ಕಾರವಾರ:ಇನ್ನು ಗ್ರಾಪಂಗಳಲ್ಲೇ ಜನನ, ಮರಣ ನೋಂದಣಿ ನಡೆಯಲಿದೆ. ಜುಲೈ 1 ರಿಂದ ಈ ಆದೇಶ ಜಾರಿಯಾಗಲಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.
 ಘಟನೆ ನಡೆದ 1 ರಿಂದ 21 ದಿನಗಳೊಳಗೆ ಉಚಿತ ನೋಂದಣಿ ಇದೆ. ಘಟನೆ ಮನೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಗಳು, ನಗರ ಪ್ರದೇಶವಾಗಿದ್ದರೆ ನಗರ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿದಲ್ಲಾಗಿದ್ದರೆ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ನಿವಾಸಿ ವೈದ್ಯಾಧಿಕಾರಿಗಳು ಕಾರಿಗಳು ನೋಂದಣಿ ಮಾಡಬೇಕು.
ಘಟನೆ ನಡೆದ 21 ರಿಂದ 30 ದಿನಗಳೊಳಗೆ ವಿಳಂಬ ಶುಲ್ಕ ಕಟ್ಟಬೇಕಾಗುತ್ತದೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯಾಕಾರಿಗಳಿಂದ ಮಾಹಿತಿ ಪಡೆದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ನಗರ ಪ್ರದೇಶವಾಗಿದ್ದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯಾಕಾರಿಗಳಿಂದ ಮಾಹಿತಿ ಪಡೆದು ನಗರ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು ನೋಂದಣಿ ಮಾಡಬೇಕು.
 ಘಟನೆ ನಡೆದ 30 ದಿನಗಳ ನಂತರ 1 ವರ್ಷದ ಒಳಗೆ ವಿಳಂಬ ಶುಲ್ಕದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ತಹಸೀಲ್ದಾರರ ಆದೇಶದೊಂದಿಗೆ ಇದೇ ಅಧಿಕಾರಿಗಳು ನೋಂದಣಿ ಮಾಡಬಹುದು. 1 ವರ್ಷದ ನಂತರವಾಗಿದ್ದರೆ ವಿಳಂಬ ಶುಲ್ಕ ಕಟ್ಟುವುದು ಮಾತ್ರವಲ್ಲದೇ, ಕೋರ್ಟ್ ಆದೇಶ, ತಹಸೀಲ್ದಾರರ ಅನುಮತಿಯೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು, ನಗರದಲ್ಲಾಗಿದ್ದರೆ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಅಥವಾ ಮುಖ್ಯಾಕಾರಿಗಳ ಲಿಖಿತ ಅನುಮತಿಯೊಂದಿಗೆ ಆರೋಗ್ಯ ನಿರೀಕ್ಷಕರು ನೊಂದಣಿ ಮಾಡಬೇಕಾಇದೆ.
ಜನನ, ಮರಣ ನೋಂದಣಿ ಕಡ್ಡಾಯವಾಗಿದ್ದು, ಸಾರ್ವಜನಿಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳ ಮಾಹಿತಿಯನ್ನು ಸಂಬಂಧಿಸಿದ ಉಪನೋಂದಣಾಕಾರಿಗಳಿಗೆ ನೀಡಿ ಕಡ್ಡಾಯವಾಗಿ ಇಜನ್ಮ ತಂತ್ರಾಂಶದಲ್ಲಿ ಒದಗಿಸಲಾಗುವ ಜನನ,ಮರಣ ಪ್ರಮಾಣ ಪತ್ರಗಳನ್ನು ಪಡೆಯುವಂತೆ ಜಿಲ್ಲಾ ಜನನ, ಮರಣ ನೋಂದಣಾಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net