ಬಸ್‌ನಿಂದ ಬಿದ್ದು ಸಾವು: ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

mysore
Published on

ಮೈಸೂರು: ಬಸ್‌ನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದ ಪ್ರಯಾಣಿಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಇತ್ತೀಚೆಗೆ ನೀಡಲಾಗಿದೆ.


ಮೇ 19ರಂದು ಶ್ರೀರಂಗಪಟ್ಟಣದಿಂದ ಹೊರಟ ಸಾರಿಗೆ ಬಸ್ ಪಾಲಹಳ್ಳಿಗೆ ತಲುಪಿತ್ತು. ಈ ಸಂದರ್ಭದಲ್ಲಿ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ ಪಾಲಹಳ್ಳಿ ನಿವಾಸಿ ಟಿ.ಪುಟ್ಟಸ್ವಾಮಿ(80) ಮೃತಪಟ್ಟಿದ್ದರು.


ಮಾರ್ಗಸೂಚಿಯಂತೆ ಮೃತ ಪತ್ನಿ ಜಯಮ್ಮ ಅವರಿಗೆ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಪರಿಹಾರದ ಚೆಕ್ ವಿತರಣೆ ಮಾಡಿದರು. ವಿಭಾಗೀಯ ಸಂಚಾರ ಅಧಿಕಾರಿ ದಶರಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net