ಜ್ವರ ಉಲ್ಬಣಗೊಂಡು ಯುವಕ ಸಾವು

PTR_25 JUL_8
Published on


ವಿಟ್ಲ: ಜ್ವರದಿಂದ ಬಳಲುತ್ತಿದ್ದ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಆಟೋರಿಕ್ಷಾ ಮೆಕಾನಿಕ್ ಸಿ.ಎಚ್.ಹನೀಫ್ ಎಂಬುವರ ಪುತ್ರ ಬಾತಿಷಾ(೨೨) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾಯಂಕಾಲ ಮೃತಪಟ್ಟಿದ್ದಾರೆ. ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ವಾರದ ಹಿಂದೆ ಜ್ವರ ಬಾಽಸಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net