

ಬೆಳ್ಳಾರೆ: ಕಲ್ಮಡ್ಕ ಮಜಲಕರೆ ನಿವಾಸಿ ರಾಮಚಂದ್ರ ಅಜ್ಜಕಾನ (42) ಹೃದಯಾಘಾತದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಅವಿವಾಹಿತರಾದ ಅವರು ತಂದೆ, ತಾಯಿ, ಇಬ್ಬರು ಸಹೋದರರನ್ನು, ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಶ್ರೀರಾಮಚಂದ್ರಾಪುರಮಠದ ಮಾಧ್ಯಮ ಕಾರ್ಯದರ್ಶಿಯಾಗಿ, ಮಾಲೂಲು ಗೋಶಾಲೆಯ ಮೇಲ್ವಿಚಾರಕರಾಗಿ, ಅಶೋಕೆಯ ವಿವಿವಿಯಲ್ಲಿ ಜವಾಬ್ದಾರಿ ಸೇರಿ ಸುಮಾರು 15ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.