ಕುಸಿದು ಬಿದ್ದು ಯುವಕ ಮೃತ್ಯು

PTR_23 MAY_6
Published on

ವಿಟ್ಲ: ಪತ್ನಿಯ ಸೀಮಂತ ಅಟ್ಟಣೆಯಲ್ಲಿದ್ದ ವ್ಯಕ್ತಿ ಕುಸಿದು ಬಿದ್ದಿದ್ದು, ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಮಿತ್ತನಡ್ಕ ಕ್ವಾಟ್ರರ್ಸ್ ನಿವಾಸಿ ಪಿಕಪ್ ಚಾಲಕ ಸತೀಶ್ (೩೩) ಮೃತಪಟ್ಟವರು. ಹಿಂದು ಸಂಘಟನೆ ಹಾಗೂ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು, ಸಂತೋಷ್ ಕುಮಾರ್ ಬೊಳಿಯಾರ್ ಜತೆಗೆ ಕೆಲಸ ನಿರ್ವಹಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬೊಳಿಯಾರ್ ಭಾಗದಲ್ಲೇ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದರು. ಕನ್ಯಾನ ಹಾಲ್ ಒಂದರಲ್ಲಿ ಮೇ ೮ರಂದು ಮಧ್ಯಾಹ್ನ ಸೀಮಂತ ನಿಗದಿಯಾಗಿದ್ದು, ಬೆಳಗ್ಗೆ ಅಲಂಕಾರ ಸೇರಿ ಎಲ್ಲ ಕೆಲಸಗಳನ್ನು ನಡೆಸಿ ಮನೆಗೆ ತೆರಳಿದವರು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಗೆ ವರ್ಗಾವಣೆ ಮಾಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೇ ೨೨ರಂದು ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟರು. ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net