ಪೆಟ್ರೋಲ್ ಹಾಕುವಾಗ ಬೆಂಕಿ ತಗುಲಿಯುವಕ ಸಾವು

Balepet Fire Accident
Published on

ಕಿಕ್ಕೇರಿ : ಹೋಬಳಿಯ ಅಣೆಚಾಕನಹಳ್ಳಿ ಗ್ರಾಮದ ಯುವಕನೊಬ್ಬ ವಾಹನಕ್ಕೆ ಪೆಟ್ರೋಲ್ ಹಾಕುವಾಗ ಬೆಂಕಿ ತಗುಲಿ ಮೃತಪಟ್ಟ

ಪ್ರಕರಣ ಭಾನುವಾರ ನಡೆದಿದೆ. ಗ್ರಾಮದ ಪುಟ್ಟಸ್ವಾಮಿ ಎಂಬವರ ರಾಖೇಶ್(25) ಮೃತ. ಈತ ಕಳೆದ 26ರಂದು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಪೆಟ್ರೋಲ್ ತಂದು ಇರಿಸಿಕೊಂಡಿದ್ದ. ಅದನ್ನು ಬೈಕ್‌ಗೆ ಹಾಕುವಾಗ ಸಿಗರೇಟು ಸೇದುತ್ತಿದ್ದ. ಆಗ ಬೆಂಕಿ ಹೊತ್ತಿಕೊಂಡು ವಾಹನ ಹಾಗೂ ಯುವಕನಿಗೆ ಆವರಿಸಿತು. ಸುಟ್ಟ ಗಾಯಗಳಿಂದ ಅಸ್ವಸ್ಥನಾದ ಆತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net