

ಅಮೀನಗಡ: ಬ್ಯಾಂಕ್ ಸಿಬ್ಬಂದಿ ಸಾಮಾಜಿಕ ಕಳಕಳಿಯೊಂದಿಗೆ ಗ್ರಾಹಕರ ಚಲನ ವಲನ ತಿಳಿದುಕೊಳ್ಳಬೇಕು ಎಂದು ಸಿಪಿಐ ಸುನೀಲ ಸವದಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಮತ್ತು ಆಭರಣ ಅಂಗಡಿ ಮಾಲೀಕರ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸರ ಬಗ್ಗೆ ಭಯಬೇಡ ವಿಶ್ವಾಸ ಇರಲಿ ಎಂದರು.
ಬ್ಯಾಂಕ್ ಸಿಬ್ಬಂದಿ ಹಾಗೂ ಆಭರಣದ ಅಂಗಡಿ ಮಾಲೀಕರು ಪ್ರತಿವಾರ ಸಿಸಿಟಿವಿ ಫೂಟೇಜ್ ಪರಿಶೀಲಿಸಿ, ಅನುಮಾನ ಬಂದ ವ್ಯಕ್ತಿ ಕುರಿತು ಹತ್ತಿರದ ಠಾಣೆಗೆ ತಿಳಿಸಬೇಕು ಎಂದರು.
ಪಿಎಸ್‌ಐ ಜ್ಯೋತಿ ವಾಲಿಕಾರ ಮಾತನಾಡಿ, ಬ್ಯಾಂಕ್ ಹಾಗೂ ಆಭರಣದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ, ಭದ್ರತಾ ಸಿಬ್ಬಂದಿ ಹಾಗೂ ಅಲಾರಾಮ ಅಳವಡಿಸಬೇಕು. ಬ್ಯಾಂಕಿಗೆ ಬರುವವರನ್ನು ಮತ್ತು ಹೋಗುವವರನ್ನು ನೋಡುವ ಮೂಲಕ ಸಂಶಯಾಸ್ಪದವಾಗಿ ಅಲೆದಾಡುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಅನುಮಾನ ಬಂದರೆ ನಮ್ಮ ಗಮನಕ್ಕೆ ತರಬೇಕು ಎಂದರು.
ಅಪರಾಧ ವಿಭಾಗದ ಪಿಎಸ್‌ಐ ಯುಸ್ು ಖಾನ್ ಠಾಣ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಪಪಂ ಸದಸ್ಯೆ ಸುಜಾತಾ ತತ್ರಾಣಿ, ಗಾಯತ್ರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ಇದ್ದರು.