ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದ ಮೂವರ ಬಂಧಿಸಿದ ಪೊಲೀಸರು

Arrest
Published on

ಬೆಳಗಾವಿ: ಸ್ಟೇಷನ್ ರಸ್ತೆಯಲ್ಲಿ ಇತ್ತೀಚೆಗೆ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ ಮೂವರನ್ನು ಖಡೇಬಜಾರ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು ಹಾಗೂ ಬೈಕ್ ಸೇರಿದಂತೆ ಎರಡು ಲಾಂಗ್ ಜಪ್ತಿ ಮಾಡಿಕೊಳ್ಳಲಾಗಿದೆ.

ನಗರದ ಚವಾಟ್ ಗಲ್ಲಿಯ ಪ್ರಪುಲ್ ಪಾಟೀಲ, ಸಮರ್ಥ ನಗರದ ರೋಹಿತ ರೇಣಕೆ ಹಾಗೂ ನಾನಾವಾಡಿಯ ಸಾಗರ ಅಲಿಯಾಸ್ ಶೈಲೇಶ ಜಾನಗವಳಿ ಬಂಧಿತರು. ವೈಯಕ್ತಿಕ ದ್ವೇಷದಿಂದ ನೀಲೇಶ ಕಾಕತಕರ, ಶಂಕರ ಭಜಂತ್ರಿ ಎಂಬುವವರ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದರು. ಬಂಧಿತ ಪ್ರಫುಲ ಪಾಟೀಲ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 9 ಪ್ರಕರಣಗಳು ಈಗಾಗಲೇ ದಾಖಲಾಗಿವೆ.

ಪ್ರಕರಣ ದಾಖಲಿಸಿಕೊಂಡ ಖಡೇಬಜಾರ್ ಎಸಿಪಿ ಚಂದ್ರಪ್ಪ, ಸಿಪಿಐ ಧೀರಜ್ ಶಿಂಧೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net