ಮೀಟರ್ ರೀಡರ್ ಮೇಲೆ ಮಾರಣಾಂತಿಕ ಹಲ್ಲೆ

beaten on man
Published on

ಹುಬ್ಬಳ್ಳಿ: ಹೆಸ್ಕಾಂ ಬಿಲ್ ಪಾವತಿಸಲು ನಿರಾಕರಿಸಿದ ವ್ಯಕ್ತಿಯೊಬ್ಬರು ಮೀಟರ್ ರೀಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಗೋಪನಕೊಪ್ಪದ ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ.

ಮೀಟರ್ ರೀಡರ್ ಮಲ್ಲಯ್ಯ ಗಣಾಚಾರಿ ಮೇಲೆ ಅಬ್ದುಲ್ ಕಲಾಯಿಗಾರ ಎಂಬಾತ ಹಲ್ಲೆ ಮಾಡಿದ್ದಾನೆ. ಕಲಾಯಿಗಾರರ ಮನೆಗೆ ತೆರಳಿದ್ದ ಮೀಟರ್ ರೀಡರ್ 4,129 ರೂ. ಮೊತ್ತದ ಬಿಲ್ ನೀಡಿದ್ದಾರೆ. ಬಿಲ್ ಪಾವತಿಸಲು ನಿರಾಕರಿಸಿದ ಕಲಾಯಿಗಾರ ವಾಗ್ವಾದಕ್ಕಿಳಿದಿದ್ದಾನೆ. ಅವಾಚ್ಯವಾಗಿ ನಿಂದಿಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಲ್ಲದೇ ಅಲ್ಲಿಯೇ ಇದ್ದ ಇಟಂಗಿಯಿಂದ ಎಡಗಣ್ಣಿಗೆ ಬಲವಾಗಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ ಎಂದು ಮಲ್ಲಯ್ಯ ಗಣಾಚಾರಿ ಅಶೋಕನಗರ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net