ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

WhatsApp Image 2024-06-27 at 4.23.21 PM
Published on

ಧಾರವಾಡ: ಆಸ್ತಿಯ ವಿಚಾರವಾಗಿ ಸಂಬ0ಧಿಕರ ಮಧ್ಯೆ ಜಗಳ ನಡೆದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ನರೇಂದ್ರ ಗ್ರಾಮದ ನಾರಾಯಣ ಮಹಾದೇವಪ್ಪ ಈಳಗೇರ ಹಲ್ಲೆಗೊಳಗಾದವರು. ಮಹಾಂತೇಶ ಈಳಗೇರ, ಮಡಿವಾಳಪ್ಪ ಈಳಗೇರ, ಬಸವರಾಜ ಈಳಗೇರ ಎಂಬುವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬ0ಽಸಿ ಈ ಕುಟುಂಬಗಳ ಮಧ್ಯೆ ವ್ಯಾಜ್ಯವಿತ್ತು. ಇದೇ ವಿಚಾರವಾಗಿ ಜೂ. 24ರಂದು ಜಗಳ ನಡೆದಿದ್ದು, ನಾರಾಯಣ ತಲೆಗೆ ಗಾಯವಾಗಿದೆ. ಬಿಡಿಸಲು ಹೋದ ರಾಘವೇಂದ್ರನ ಮೇಲೂ ಹಲ್ಲೆ ನಡೆಸಲಾಗಿದೆ.
ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net