ಚರಂಡಿ ದುರಸ್ತಿಗೆ ಎಸಿ ಗಡು

Upp_deadline
Published on

ಉಪ್ಪಿನಂಗಡಿ: ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ದುರ್ನಾತದ ಸಂಕಷ್ಟಕ್ಕೆ ತುತ್ತಾಗಿರುವ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆಗೆ ಪುತ್ತೂರು ಸಹಾಯಕ ಕಮಿಷನರ್​ ಜುಬಿನ್​ ಮೊಹಾಪಾತ್ರ ಗುರುವಾರ ಭೇಟಿ ನೀಡಿ ಸಮಸ್ಯೆ ನಿವಾರಿಸಲು ಸಂಬಂಧಿಸಿದ ಅಧಿಕಾರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದರು.

ಹೆದ್ದಾರಿ ಅಗಲೀಕರಣದ ವೇಳೆ ಚರಂಡಿ ನಿರ್ಮಾಣದ ಲೋಪದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಶಾಲಾಡಳಿತ ದೂರಿತ್ತ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್​ ಡಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲಹೊತ್ತು ಶಾಲಾ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.

ಎಸ್​ಡಿಎಂಸಿ ಅಧ್ಯಕ್ಷ ಅಬ್ದುಲ್​ ಮಜೀದ್​, ಸದಸ್ಯರಾದ ಫಾರೂಕ್​ ಜಿಂದಗಿ, ಕಲಂದರ್​ ಶಾಪಿ, ಹಿರಿಯ ವಿದ್ಯಾರ್ಥಿ ಸಂದ ಅಬ್ದುಲ್​ ರಹಿಮಾನ್​, ಪ್ರಮುಖರಾದ ಡಾ.ರಾಜಾರಾಮ ಕೆ.ಬಿ., ಪ್ರಶಾಂತ್​ ಡಿಕೋಸ್ಟಾ, ನಾಗೇಶ್​ ಪ್ರಭು, ಯು.ಟಿ. ಮಹಮ್ಮದ್​ ತೌಷಿಫ್​ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net