ನೇಮಕ್ಕೆಂದು ಹೊರಟ ಯುವಕನ ಮೃತದೇಹ ಪತ್ತೆ

Dead body
Published on
ಈಶ್ವರಮಂಗಲ: ಕೆರೆಗೆ ಬಿದ್ದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಬಗ್ಗೆ ಮಾ.7ರಂದು ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆಯಿಂದ ವರದಿಯಾಗಿದೆ.
ಬೆಟ್ಟಂಪಾಡಿ ಗುಮ್ಮಟೆಗದ್ದೆ ಕೂಸಪ್ಪ ಗೌಡರವರ ಪುತ್ರ ಪವನ್ ಮೃತಪಟ್ಟವರು. ತಮ್ಮ ಮನೆಯ ನೆರೆಮನೆಯಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿ ಬರುವುದಾಗಿ ತೆರಳಿದ್ದ ಪವನ್ ಬೆಳಿಗ್ಗೆಯಾದರೂ ಮನೆಗೆ‌ ಹಿಂತಿರುಗಿರಲಿಲ್ಲ.
ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಅಗಿತ್ತು. ಹೀಗಾಗಿ ಮನೆ ಮಂದಿ ಹುಡುಕಾಡುತ್ತಾ ಹೋದಾಗ ಮನೆ ಸಮೀಪದಲ್ಲಿರುವ ಕೆರೆಯಲ್ಲಿ ಅವರ ಚಪ್ಪಲು ತೇಲುತ್ತಿರುವುದು ಕಂಡುಬಂದಿದೆ.
ಇದರಿಂದ‌ ಅನುಮಾನಗೊಂಡು ಕೆರೆಯ ಬಳಿ ಬಂದು ನೋಡಿದಾಗ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ‌ ತನಿಖೆ ನಡೆಸುತ್ತಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಐವರು ಸಹೋದರಿಯರನ್ನು ಅಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net