ಚಿರತೆ ಮೃತದೇಹ ಪತ್ತೆ

27sirsi2
Published on

ಶಿರಸಿ: ತಾಲೂಕಿನ ಜಾನ್ಮನೆ ಅರಣ್ಯ ವ್ಯಾಪ್ತಿಯ ಸರಗುಪ್ಪಾ ವ್ಯಾಪ್ತಿ ಬೆಣಗಾಂವದಲ್ಲಿ ಚಿರತೆಯ ಮೃತದೇಹ ಗುರುವಾರ ಪತ್ತೆಯಾಗಿದೆ. ಅಂದಾಜು 8 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಮೈಮೇಲೆ ಯಾವುದೇ ಗಾಯ ಹೊಂದಿರದ ಚಿರತೆ ಕಾಡಿನ ಮಧ್ಯೆ ಕೆಲ ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತಗೊಂಡಿದೆ. ಪಶು ಸಂಗೋಪನಾಧಿಕಾರಿ ಡಾ. ಪ್ರಶಾಂತ ಅವರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ, ಸಹಜ ಸಾವನ್ನು ದೃಢಪಡಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜೆ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಎನ್., ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ, ವಿನಯಕುಮಾರ ಶಿವಣಗಿ, ಕಿರಣ ಬುರ್ಜಿ, ದೇವನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಮರಾಠಿ ಅವರ ಸಮ್ಮುಖದಲ್ಲಿ ಚಿರತೆಯ ಅಂತ್ಯಕ್ರಿಯೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net