ಅಸುನೀಗಿದ ಹರಕೆ ಕೋಣಕ್ಕೆ ಭಕ್ತರ ಕಂಬನಿ

khhalli kambani
ಕಾನಹೊಸಹಳ್ಳಿಯಲ್ಲಿ ಅಸುನೀಗಿದ ಹರಕೆ ಕೋಣವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು.
Published on

ಕಾನಹೊಸಹಳ್ಳಿ: ಗ್ರಾಮದೇವತೆ ಮಾರಮ್ಮ ದೇವಿಯ ಹರಕೆ ಪಟ್ಟದ ಕೋಣ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಗುರುವಾರ ವಿಧಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಅಂತ್ಯಕ್ರಿಯೆ ನಡೆಸಿದರು.

ಕಳೆದೊಂದು ತಿಂಗಳಿಂದ ಅನಾರೋಗ್ಯಕ್ಕೀಡಾಗಿ ನರಳುತ್ತಿದ್ದ ಕೋಣಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆಯಿತು. ಊರ ಬಾಗಿಲ ಬಳಿ ಗುರುವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮಸ್ಥರು, ಭಕ್ತರು ದರ್ಶನ ಪಡೆದು ಪೂಜೆ ಸಲ್ಲಿಸಿ, ಕಂಬನಿ ಮಿಡಿದರು. ಬೆಳಗ್ಗೆ ಸಕಲ ವಾದ್ಯಗಳೊಂದಿಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರು ದಾರಿಯುದ್ದಕ್ಕೂ ಪೂಜೆ ಸಲ್ಲಿಸಿದರು. ಹಳೆಯ ಪಾದಗಟ್ಟೆ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net