

ಚಿಕ್ಕಬಳ್ಳಾಪುರ: ತಾಲೂಕಿನ ಕೊಳವನಹಳ್ಳಿಯಲ್ಲಿ ಕೃಷಿ ಹೊಂಡ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ.
35 ವರ್ಷದ ಅಪರಿಚಿತ ವ್ಯಕ್ತಿ ಮೃತ. ಗ್ರಾಮದ ವಾಸುದೇವ್ ಎಂಬುವರಿಗೆ ಸೇರಿದ ತೋಟದಲ್ಲಿನ ಕೃಷಿ ಹೊಂಡದ ನೀರಿನಲ್ಲಿ ಮೃತದೇಹವು ತೇಲಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಆಕಸ್ಮಿಕವೋ?ಕೊಲೆಯೋ?*
ಕಳೆದ ಒಂದು ವಾರದಿಂದಲೂ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಜಲಮೂಲಗಳು ಸಮೃದ್ಧಿ ನೀರನ್ನು ಹೊಂದಿವೆ. ಅದರಂತೆ ಇಲ್ಲಿನ ಕೃಷಿ ಹೊಂಡದಲ್ಲಿ ನೀರು ಭರ್ತಿಯಾಗಿತ್ತು. ಎಂದಿನಂತೆ ಶುಕ್ರವಾರ ಮಾಲೀಕರು ಹೊಂಡದ ಬಳಿಗೆ ಬಂದಾಗ ನೀರಿನಲ್ಲಿ ಯುವಕನ ಶವ ತೇಲುತ್ತಿರುವುದು ಕಂಡು ಬಂದಿದೆ. ಇದು ಕಾಲು ಜಾರಿ ಬಿದ್ದು ಮೃತಪಟ್ಟ ಆಕ್ಮಸಿಕ ಘಟನೆಯೋ? ಇಲ್ಲವೇ ಬೇರೆ ಕಡೆ ಕೊಲೆ ಮಾಡಿ, ಇಲ್ಲಿ ನೀರಿನಲ್ಲಿ ತಂದು ಬಿಸಾಡಿಲಾಗಿದೆಯೋ? ಎಂಬ ಅನುಮಾನ ಮೂಡಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.