

ಕಾರವಾರ: ವಾರದ ಹಿಂದೆ ಕುಂದಾಪುರದ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕಾರವಾರ ತೀರದಲ್ಲಿ ಮಂಗಳವಾರ ಪತ್ತೆಯಾಗಿದೆ.!!
ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್.ಯೋಗೇಶ(23)ಮೃತರು. ಕುಂದಾಪುರ ಬಿಜಾಡಿಯಲ್ಲಿ ಜೂನ್ 20 ರಂದು ಆಯೋಜನೆಯಾಗಿದ್ದ ವಿವಾಹವೊಂದಕ್ಕೆ ತಿಪಟೂರಿನಿಂದ ಯೋಗೇಶ ಹಾಗೂ ಸಂದೀಪ ಎಂಬುವವರು ಬೈಕ್ ಮೇಲೆ ಜೂನ್ 19 ರಂದು ಬಂದು ಇಳಿದಿದ್ದರು. ಅಂದು ಸಾಯಂಕಾಲ ಸಮುದ್ರಕ್ಕೆ ಈಜಲು ಹೋದಾಗ ನೀರಿನಲ್ಲಿ ಮುಳುಗಿದ್ದರು. ಸಂದೀಪನ್‌ನನ್ನು ಸ್ಥಳೀಯರು ರಕ್ಷಿಸಿದ್ದು, ಯೋಗೇಶ ಮೃತ ದೇಹವೂ ಸಿಕ್ಕಿರಲಿಲ್ಲ. ಕುಂದಾಪುರದಲ್ಲಿ ದೂರು ದಾಖಲಾಗಿತ್ತು. ಸೋಮವಾರ ಶಹರದ ಅಲಿಗದ್ದಾ ತೀರದಲ್ಲಿ ಮೃತ ದೇಹ ಕಂಡುಬಂದಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವು ಸಮುದ್ರದಲ್ಲಿ ಸುಮಾರು 180 ಕಿಮೀಗೂ ಹೆಚ್ಚು ದೂರ ಬಂದು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.