ಬಸ್ ತಂಗುದಾಣದಲ್ಲಿಟ್ಟಿದ್ದ ಮೃತ ದೇಹದ ವರದಿ ನೆಗೆಟಿವ್

4-hvr-05
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ರಾಣೆಬೆನ್ನೂರ ಬಸ್ ತಂಗುದಾಣದಲ್ಲಿ ಶನಿವಾರ ಇಟ್ಟಿದ್ದ ಕರೊನಾ ಶಂಕಿತ ಮೃತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಎಸ್​ಒಪಿ ಮಾರ್ಗಸೂಚಿಯ ಪ್ರಕಾರವೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅನಾರೋಗ್ಯದ ಕಾರಣಕ್ಕಾಗಿ ರಾಣೆಬೆನ್ನೂರ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯ ತಪಾಸಣೆ ನಡೆಸಿ ಕಳಿಸಲಾಗಿತ್ತು. ಬಳಿಕ ಈತ ಬಸ್ ತಂಗುದಾಣದಲ್ಲಿ ನಿಂತಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಶವವನ್ನು ಸುರಕ್ಷಿತವಾಗಿ ಮುಚ್ಚಲಾಗಿತ್ತು. ಆಂಬುಲೆನ್ಸ್​ಗಾಗಿ ಸಿಬ್ಬಂದಿ ಕಾಯುತ್ತಿದ್ದ ವೇಳೆ ತಂಗುದಾಣದಲ್ಲಿ ಶವ ಇರಿಸಲಾಗಿತ್ತು. ಇದನ್ನೇ ಕೆಲವರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಮೃತದೇಹವನ್ನು ಗೌರವಯುತವಾಗಿ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net