ಕೂಲಿ ಕಾರ್ಮಿಕನ ಮೃತದೇಹ ಪತ್ತೆ

New Project (40)
Published on

ಕಾಸರಗೋಡು: ನಾಪತ್ತೆಯಾಗಿದ್ದ ಕುಂಬ್ಡಾಜೆ ಪಂಚಾಯಿತಿ ಬಾಳಗದ್ದೆ ನಿವಾಸಿ ನಾರಾಯಣ ಮಣಿಯಾಣಿ(50) ಎಂಬುವರ ಮೃತದೇಹ ಸನಿಹದ ತೋಡಿನಲ್ಲಿ ಪತ್ತೆಯಾಗಿದೆ. ಕೂಲಿ ಕಾರ್ಮಿಕರಾಗಿದ್ದ ಅವರು ಸೋಮವಾರ ಬೆಳಗ್ಗೆ ಮನೆಯಿಂದ ಹೊರಟು ವಾಪಸಾಗದ ಹಿನ್ನೆಲೆಯಲ್ಲಿ ಸಹೋದರ ಉದಯ ಕುಮಾರ್ ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಪೆರ್ವತ್ತೋಡಿ ಕಾಯಿಮಲೆ ಪ್ರದೇಶದ ತೋಡಿಗೆ ತೆಂಗಿನ ಮರದಿಂದ ನಿರ್ಮಿಸಿದ್ದ ಕಾಲು ದಾರಿಯಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಇದರಿಂದ ಆಯತಪ್ಪಿ ಬಿದ್ದು ನೀರು ಪಾಲಾಗಿರಬೇಕೆಂದು ಕ್ಷಿಂಶಯಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net