

ಕಾಸರಗೋಡು: ಉದುಮ ತಚ್ಚಂಗಾಡ್ ಸನಿಹದ ಪಾಲತ್ತೋಡು ನಿವಾಸಿ, ತೆಂಗಿನಕಾಯಿ ಕೀಳುವ ಕಾರ್ಮಿಕ ಸುನೀಲ್ ಕುಮಾರ್(44)ಅವರ ಮೃತದೇಹ ಅವರು ವಾಸಿಸುತ್ತಿದ್ದ ಪ್ಲಾಸ್ಟಿಕ್ಹೊದಿಸಿದ ಜೋಪಡಿಯಲ್ಲಿ ಪತ್ತೆಯಾಗಿದೆ. ಸುನೀಲ್ ಕುಮಾರ್ ಇಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಅವರ ತಾಯಿ ಅಲ್ಲಿಗೆ ಆಗಮಿಸಿದಾಗ ಮೃತದೇಹ ಪತ್ತೆಯಾಗಿದೆ. ಬೇಕಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿದ್ದು, ಶವ ಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.