ಸೇತುವೆ ಕೆಳಗೆ ಅಪರಿಚಿತನ ಶವಪತ್ತೆ

sorb
ಶವವನ್ನು ಹೊರ ತೆಗೆದ ಸೊರಬ ಅಗ್ನಿಶಾಮಕದಳದ ಸಿಬ್ಬಂದಿ.
Published on

ಸೊರಬ: ತಾಲೂಕಿನ ಜಡೆ ಹೋಬಳಿಯ ಕೆರೆಹಳ್ಳಿ ಸೇತುವೆ ಕೆಳಗೆ ಶವೊಂದು ತೇಲುತ್ತಿದ್ದು ಸೊರಬ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಸಂಜೆ ಹೊರತೆಗೆದು ಪೊಲೀಸರಿಗೆ ಒಪ್ಪಿಸಿದರು. ಮೃತ ವ್ಯಕ್ತಿ ಸುಮಾರು 45 ವರ್ಷ ವಯಸ್ಸಿನವರಾಗಿದ್ದು ಕೆಂಪು ಶರ್ಟ್, ಕಪ್ಪು ಚೆಡ್ಡಿ ಧರಿಸಿದ್ದಾರೆ. ಸ್ಥಳೀಯರು ಈತ ಈ ಭಾಗದ ವ್ಯಕ್ತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net