ಮಂಡ್ಯ-ಹನಕೆರೆ ರೈಲ್ವೆ ನಿಲ್ದಾಣದ ಸಮೀಪ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Crime Logo
Published on

ಮಂಡ್ಯ: ತಾಲೂಕಿನ ಹನಕೆರೆ-ಮಂಡ್ಯ ರೈಲ್ವೆ ನಿಲ್ದಾಣದ ಸೇತುವೆ ಸಮೀಪ ಅಪರಿಚಿತ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷದವನಾಗಿದ್ದಾನೆ. ಆತನ ಬಲಗೈಯಲ್ಲಿ ಮಹೇಶಣ್ಣ, ರಘು, ಗಂಗಾ ಹೆಸರು ಹಾಗೂ ಎಡಗೈಯಲ್ಲಿ ಓಂ ಎಂದು ಹಸಿರು ಹಚ್ಚೆ ಇದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net