ಬೈಂದೂರು: ಇಲ್ಲಿನ ಹೇನಬೇರು ನಿರ್ಜನ ಪ್ರದೇಶದ ಕಾರಿನಲ್ಲಿ ವ್ಯಕ್ತಿಯೊಬ್ಬ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತ ದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ..ಕಾರ್ ಸಂಪೂರ್ಣ ಸುಟ್ಟುಹೋಗಿದೆ..ಫೋರ್ಡ್ ಐಕಾನ್ ಕಾರ್ ಹಿಂದಿನ ಸೀಟಿನಲ್ಲಿ ವ್ಯಕ್ತಿ ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದ್ದು ಕಾರಿನ ಬಳಿ ಪೆಟ್ರೋಲ್ ತುಂಬಿಸಿಕೊಂಡು ಬಂದ ಕ್ಯಾನ್ ಪತ್ತೆಯಾಗಿದೆ..ಕಾರ್ ನೊಂದಣಿ ಸಂಖ್ಯೆ ಸಂಪೂರ್ಣ ಸುಟ್ಟು ಹೋದ ಕಾರಣ ಮೃತ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ..ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆಯಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಮಣಿಪಾಲ ಫೋರೆನ್ಸಿಕ್ ತಜ್ಞರು ಆಗಮಿಸಿದ್ದಾರೆ.