ಪೊಲೀಸ್​ ಠಾಣೆಯ ಎದುರಿನ ಮೋರಿಯಲ್ಲಿ ಡೆಡ್ ಬಾಡಿ​! ದೃಶ್ಯ ಸಿನಿಮಾವನ್ನು ನಿಜ ಮಾಡಿದ ಖದೀಮರು!

mori
Published on

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸ್​ ಠಾಣೆಯ ಮುಂಭಾಗದಲ್ಲಿ ಶವವೊಂದು ಪತ್ತೆಯಾಗಿದೆ. ಮೋರಿ ಅಡಿಯಲ್ಲಿ ಶವ ಪತ್ತೆಯಾಗಿದ್ದು, ಎರಡು ವರ್ಷಗಳ ಹಿಂದೆಯೇ ದೇಹವನ್ನು ಬಚ್ಚಿಟ್ಟಿರುವ ಅನುಮಾನ ವ್ಯಕ್ತವಾಗಿದೆ.

ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಹೆಚ್ ಬಿ ಆರ್ ಕಲ್ಯಾಣ ಮಂಟಪದ ಮುಂದಿರುವ ಮೋರಿಯಲ್ಲಿ ಶವ ಪತ್ತೆಯಾಗಿದೆ. ಕಲ್ಲು ಮುಚ್ಚಿದ್ದ ಮೋರಿಯ ಕಲ್ಲನ್ನು ಸೋಮವಾರದಂದು ಸ್ವಚ್ಛ ಮಾಡುವ ಕಾರಣಕ್ಕಾಗಿ ತೆಗೆಯಲಾಗಿದೆ. ಆಗ ಅಲ್ಲಿ ಶವ ಕಾಣಿಸಿಕೊಂಡಿದೆ. ದೃಶ್ಯ ಸಿನಿಮಾದಲ್ಲಿ ಶವವನ್ನು ಪೊಲೀಸ್​ ಠಾಣೆಯ ಅಡಿಯಲ್ಲೇ ಹೂತಿಡುವಂತೆ ಈ ಘಟನೆಯಲ್ಲೂ ಪೊಲೀಸ್​ ಠಾಣೆಯ ಬಳಿಯೇ ಹೂತಿಟ್ಟಿರುವುದು ಅನೇಕ ಅನುಮಾನಗಳನ್ನು ಹುಟ್ಟಿಸಿದೆ.

ಇದೀಗ ಈ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು ಮೋರಿ ನಿರ್ಮಾಣ ಮಾಡಿದವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಶವವನ್ನು ತೆರವುಗೊಳಿಸಲಾಗಿರುವ ವಿಜಯನಗರ ಪೊಲೀಸರು ಅನಾಥ ಶವದ ಬಗ್ಗೆ ಮಾಹಿತಿ ಹುಡುಕಾಟ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net