ಯುವಕನ ಮೃತದೇಹ ಪತ್ತೆ

sumith
Published on

ಗುರುಪುರ: ಮರವೂರಿನ ರೈಲ್ವೆ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರಲ್ಲಿ ಇಬ್ಬರು ಸೋಮವಾರ ನೀರುಪಾಲಾಗಿದ್ದು, ಸತತ ಕಾರ್ಯಾಚರಣೆ ಬಳಿಕ ಸುಮಿತ್(20) ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಉರ್ವ ಅಂಗಡಿ ನಿವಾಸಿ ಅನೀಶ್(19) ಎಂಬಾತನ ಮೃತದೇಹ ಸೋಮವಾರ ಪತ್ತೆಯಾಗಿದ್ದರೆ, ಸುಮಿತ್ ಮೃತದೇಹ ಪತ್ತೆ ಕಾರ್ಯ ಮಂಗಳವಾರದವರೆಗೆ ಮುಂದುವರಿದಿತ್ತು. ಭಾನುವಾರ ಕೋಡಿಕಲ್ ನಿವಾಸಿಗಳಾದ ಅರುಣ್(19), ದೀಕ್ಷಿತ್(18), ಕೊಟ್ಟಾರ ಚೌಕಿ ನಿವಾಸಿ ಸುಮಿತ್(20) ಮತ್ತು ಉರ್ವ ಅಂಗಡಿ ನಿವಾಸಿ ಅನೀಶ್(19) ಎಂಬುವರು ಮರವೂರಿನ ರೈಲ್ವೆ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಈಜುತ್ತಿದ್ದಾಗ ಸುಮಿತ್ ಮತ್ತು ಅನೀಶ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿದೆ. ಬಜ್ಪೆ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್., ನೇತೃತ್ವದ ಪೊಲೀಸ್ ತಂಡ ಶೋಧ ಕಾರ್ಯಕ್ಕೆ ಸಹಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net