ಈಜಲು ಹೋಗಿ ನಾಪತ್ತೆಯಾಗಿದ್ದ ಬಾಲಕನ  ಮೃತದೇಹ ಪತ್ತೆ

WhatsApp Image 2023-10-16 at 10.00.14_21300497
Published on

ಪುತ್ತೂರು ಗ್ರಾಮಾಂತರ :ಗೌರಿ ಹೊಳೆಯ ನೀರಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಬಾಲಕನ  ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲಿಮ್ (17) ಮೃತಪಟ್ಟವರು. ತಸ್ಲೀಮ್ ಅ.15ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ಸಂಭವಿಸಿತ್ತು. ತಸ್ಲೀಮ್  ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net