ಹಾಗದೂರು ಸಮೀಪ ಅಪರಿಚಿತ ಶವ ಪತ್ತೆ

4hgr1.
Published on

ಹಲಗೂರು:ಸಮೀಪದ ಹಾಗದೂರು ಗ್ರಾಮದ ರಸ್ತೆ ಬದಿ ಸುಮಾರು 60 ವರ್ಷದ ವ್ಯಕ್ತಿಯ ಮೃತದೇಹ ಮಂಗಳವಾರ ಪತ್ತೆಯಾಗಿದೆ. ವಾಯು ವಿಹಾರಕ್ಕೆ ತೆರಳಿದ್ದಾಗ ಸಾರ್ವಜನಿಕರು ಮೃತದೇಹ ಗಮನಿಸಿ ಹಲಗೂರು ಪೊಲೀಸರಿಗೆ ವಿಷಯ ತಿಳಿಸಿದರು.

ವಯೋ ಸಹಜ ಕಾಯಿಲೆಯಿಂದ ವ್ಯಕ್ತಿ ಮೃತಪಟ್ಟಿರಬಹುದೆಂದು ಎಂದು ಪೊಲೀಸರು ತಿಳಿಸಿದ್ದಾರೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನು ನೀಲಿ ಬಣ್ಣದ ಅಂಗಿ, ಬಿಳಿ ಬಣ್ಣದ ಲುಂಗಿ ಧರಿಸಿದ್ದು, ಕಪ್ಪು ಬಿಳಿ ಮಿರ್ಶರಿತ ತಲೆ ಕೂದಲು ಇದೆ. ವ್ಯಕ್ತಿಯ ವಿಳಾಸ ಪತ್ತೆಯಾಗದಿರುವ ಕಾರಣ ಮೃತದೇಹವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ವಾರಸುದಾರರು ಇದ್ದಲ್ಲಿ ಹಲಗೂರು ಪೊಲೀಸ್ ಠಾಣೆ (ದೂರವಾಣಿ ಸಂಖ್ಯೆ 08231-295322) ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net