

ಹೊಳೆನರಸೀಪುರ: ಪಟ್ಟಣದ ಬಸ್ ನಿಲ್ದಾಣದ ಸಾರ್ವಜನಿಕ ಮೂತ್ರಾಲಯದ ಮೆಟ್ಟಿಲ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಗೆ 40 ರಿಂದ 42 ವರ್ಷವಾಗಿರಬಹುದು ಎನ್ನಲಾಗಿದೆ. ಬಲಗೈಯಲ್ಲಿ ಎಲೆ ಚಿತ್ರದ ಹಚ್ಚೆ ಹಾಗೂ ನೀಲಿ ಬಣ್ಣದ ಅಂಗಿ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಹತ್ತಿರದ ಠಾಣೆ ಅಥವಾ ನಗರ ಪೊಲೀಸ್ ಠಾಣೆಗೆ (08175 273333) ಗೆ ಕರೆ ಮಾಡಿ ತಿಳಿಸಲು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.