ಮಂಗಳೂರಿನಲ್ಲಿ ಕಾಗೆಗಳ ಕಳೇಬರ ಪತ್ತೆ

Published on

ಇತ್ತೀಚೆಗೆ ಮಂಜನಾಡಿ ಬಳಿಯೂ ನಾಲ್ಕು ಕಾಗೆಗಳ ಕಳೇಬರ ಪತ್ತೆಯಾಗಿದ್ದು ಅವುಗಳನ್ನು ಬೆಂಗಳೂರಿನ ಪಶುವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಹಕ್ಕಿಜ್ವರ ಲಕ್ಷಣ ಇಲ್ಲ ಎಂದು ತಜ್ಞರು ತಿಳಿಸಿದ್ದರು.

ಇದರಲ್ಲಿ ಪಚ್ಚನಾಡಿಯ ಕಾಗೆಗಳ ಕಳೇಬರವನ್ನು ಅರಣ್ಯ ಇಲಾಖೆಯವರು ತಂದಿದ್ದು, ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೇಲ್ನೋಟಕ್ಕೆ ಹಕ್ಕಿಜ್ವರ ಲಕ್ಷಣವಾದ ಆಂತರಿಕ ರಕ್ತಸ್ರಾವ ಕಾಗೆಗಳಲ್ಲಿ ಕಂಡುಬಂದಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿಕೊಳಲಾಗಿದೆ ಎಂದು ತಜ್ಞರಾದ ಡಾ.ವಸಂತ್‌ ಶೆಟ್ಟಿ ತಿಳಿಸಿದ್ದಾರೆ.

ನಗರದ ಹೊರವಲಯದ ಪಚ್ಚನಾಡಿಯಲ್ಲಿ ಮೂರು ಕಾಗೆಗಳ ಶವ ಪತ್ತೆಯಾಗಿದ್ದರೆ ಶಕ್ತಿನಗರ ಹೌಸಿಂಗ್‌ ಕಾಲೋನಿ ಬಳಿ ೨ ಕಾಗೆಗಳ ಕಳೇಬರ ಸಿಕ್ಕಿದೆ.

ಮಂಗಳೂರು: ನೆರೆಯ ಕೇರಳದಲ್ಲಿ ಹಕ್ಕಿ ಜ್ವರ ಇರುವಾಗಲೇ ಮಂಗಳೂರಿನಲ್ಲಿ ಮತ್ತೆ ಐದು ಕಾಗೆಗಳ ಕಳೇಬರ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net