ವಿದ್ಯುತ್ ಕಂಬ ಬಿದ್ದು ಕಾರ್ಮಿಕ ಸಾವು

ravi - DEad
Published on

ಹೊಳೆನರಸೀಪುರ : ವಿದ್ಯುತ್ ಕಂಬ ಬಿದ್ದು ಕಾರ್ಮಿಕ ರವಿ (43) ಸ್ಥಳದಲ್ಲೇ ಮೃತರಾಗಿದ್ದಾರೆ. ಕೆರಗೋಡು ಗ್ರಾಮದ ರವಿ ಸೋಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕಂಬ ನೆಡುತ್ತಿದ್ದರು. ಆ ವೇಳೆ ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಇವರ ತಲೆಯ ಮೇಲೆ ಬಿತ್ತು. ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದರು. ಮತ್ತೊಬ್ಬ ಕಾರ್ಮಿಕ ಲೋಕೇಶ ಎಂಬವರಿಗೆ ಇದೇ ಸಂದರ್ಭ ತೀವ್ರ ಪೆಟ್ಟಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳ್ಳಿ ಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net