ಕಳಿಯಾಟ ಸಮಿತಿಯಿಂದ ಧರ್ಮಾಧಿಕಾರಿ ಭೇಟಿ

New Project (39)
Published on

ಬದಿಯಡ್ಕ: ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಕಳಿಯಾಟ ಮಹೋತ್ಸವ 2024 ಡಿ.22ರಿಂದ 30ರ ತನಕ ನಡೆಯಲಿದ್ದು, ಸಮಿತಿಯ ಪದಾಧಿಕಾರಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ನೀಡಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ದೈವಸ್ಥಾನದ ವಿವಿಧ ಸಮಿತಿ ಸದಸ್ಯರಾದ ಚಂದ್ರಶೇಖರ ಕುರುಪ್ ಉಬ್ರಂಗಳ, ಸುಬ್ರಹ್ಮಣ್ಯ ಮೈಲ್ತೊಟ್ಟಿ, ಕುಂಞಿಕಣ್ಣ ಉಳಿಯ, ವೇಣುಗೋಪಾಲ ಪುತ್ತಿಗೆ, ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net