ಡಿ.18ರಿಂದ ಕುಡಿತ ಬಿಡಿಸುವ ಕಾರ್ಯಕ್ರಮ

Published on

ಮೈಸೂರು: ಶ್ರೀ ಸುತ್ತೂರು ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಡಿ.18ರಿಂದ 27ರ ವರೆಗೆ ಕುಡಿತ ಬಿಡಿಸುವ ಕಾರ್ಯಕ್ರಮವನ್ನು ಪಿರಿಯಾಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
ಸಾಮಾಜಿಕ ಸಮಸ್ಯೆಯ ಪರಿಹಾರದಲ್ಲಿ ಆಸಕ್ತಿಯುಳ್ಳವರು ಮದ್ಯವ್ಯಸನಿಗಳನ್ನು ಕರೆದುಕೊಂಡು ಬಂದು ಶಿಬಿರಕ್ಕೆ ಸೇರಿಸಬಹುದಾಗಿದೆ. ಶಿಬಿರಾರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಭಾವಚಿತ್ರ, ಅಗತ್ಯ ಬಟ್ಟೆ ಹಾಗೂ ಹೊದಿಕೆಗಳನ್ನು ತೆಗೆದುಕೊಂಡು ಬರಬೇಕು. ಹೆಸರು ನೋಂದಾಯಿಸಲು, ಮಾಹಿತಿಗಾಗಿ ಮೊ.9620552310, 9945494612 ಅಥವಾ 9448653897 ಸಂಪರ್ಕಿಸಲು ಕೋರಿದೆ.
ಮದ್ಯಪಾನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ಮನಗಂಡು ಸಾರ್ವಜನಿಕರಲ್ಲಿ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ ಮದ್ಯವ್ಯಸನಿಗಳನ್ನು ಆ ಚಟದಿಂದ ಮುಕ್ತರಾಗಿಸಲು ಶಿಬಿರಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net