ಡಿಡಿಪಿಐ ಕೆಳದಿಮಠ ವರ್ಗಾವಣೆ ರದ್ದು

web 4
Published on

ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದ ಷಣ್ಮುಖಸ್ವಾಮಿ ಕೆಳದಿಮಠ ವರ್ಗಾವಣೆಯನ್ನು ರದ್ದು ಮಾಡಿ ಸರ್ಕಾರ ಬುಧವಾರ ಆದೇಶಿಸಿದೆ. ಕೆಳದಿಮಠ ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಆ. ೧ರಂದು ವರ್ಗಾವಣೆ ಮಾಡಲಾಗಿತ್ತು. ಆ ಹುದ್ದೆಯಲ್ಲಿದ್ದ ಮಂಗಲಾ ನಾಯಕ ಅವರನ್ನು ಧಾರವಾಡ ಡಿಡಿಪಿಐ ಹುದ್ದೆಗೆ ನೇಮಕ ಮಾಡಲಾಗಿತ್ತು. ಏಕಾಏಕಿ ವರ್ಗಾವಣೆಯನ್ನು ರದ್ದು ಮಾಡಲಾಗಿದ್ದು, ಇಬ್ಬರೂ ಅಽಕಾರಿಗಳು ಮೊದಲು ಕಾರ್ಯನಿರ್ವಹಿಸುತ್ತಿದ್ದ ಹುದ್ದೆಯಲ್ಲೇ ಮುಂದುವರಿಯಬೇಕು ಎಂದು ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net