ವಿದ್ಯಾಥಿರ್ಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ& ಶಿಕ್ಷಣಾಧಿಕಾರಿ ಬುರಡಿ

17GDG03
ಎಸ್ಸೆಸ್ಸೆಲ್ಸಿ ಮರು ಪರೀೆಗೆ ಅನುತ್ತೀರ್ಣರಾದ ವಿದ್ಯಾಥಿರ್ಗಳು ಹಾಜರಾಗುವಂತೆ ಶಿಕ್ಷಣಾಧಿಕಾರಿಗಳು ಗದಗ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಆರ್​.ಎಸ್​. ಬುರಡಿ, ಕವಿತಾ ಬೇಲೇರಿ, ವೈ. ಎಸ್​. ಬೊಮ್ಮನಾಳ, ಪಿ. ಎಸ್​. ಕರೆಕುಲದ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಲ್ಲರು. ಅನುತ್ತೀರ್ಣರಾದ ವಿದ್ಯಾಥಿರ್ಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ ಪಾಲಕರ ಮನವೊಲಿಸಿ ವಿದ್ಯಾಥಿರ್ಗಳು ಎಸ್ಸೆಸ್ಸೆಲ್ಸಿ ಮರು ಪರೀೆಗೆ ಹಾಜಾರಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಗದಗ ಶಹರ ಕ್ಷತ್ರ ಶಿಣಾಧಿಕಾರಿ ಆರ್​. ಎಸ್​. ಬುರಡಿ ಹೇಳಿದರು.
ನಗರದ ರಾಜೀವ ಗಾಂಧಿ ನಗರದ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮರು ಪರೀೆಕ್ಷಗೆ ಹಾಜರಾಗುವ ವಿದ್ಯಾಥಿರ್ಗಳ ಮನೆಗೆ ಭೇಟಿ ನೀಡಿ ಪಾಲಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಅನುತೀರ್ಣರಾದ ವಿದ್ಯಾಥಿರ್ಗಳಿಗೆ ಪ್ರೌಢಶಾಲೆಗಳಲ್ಲಿ ವಿಶೇಷ ಪರಿಹಾರ ಬೊಧನೆ ಪ್ರಾರಂಭಗೊಂಡಿದ್ದು ಮಕ್ಕಳು ವರ್ಗಗಳಿಗೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ವಿದ್ಯಾಥಿರ್ಗಳ ಶೈಣಿಕ ಹಿತದೃಷ್ಠಿಯಿಂದ ಹಾಗೂ ಸದರಿ ವಿದ್ಯಾಥಿರ್ಗಳು ಮುಂದಿನ ಉನ್ನತ ಶಿಣದ ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್​.ಬಿ.ಬಾಗೇವಾಡಿ ಮಾತನಾಡಿ, ವಿಷಯ ಶಿಕರಿಂದ ವಿಷಯವಾರು ಭೋಧನೆ ನಡೆಯುತ್ತಿವೆ. ಇದನ್ನು ಸದುಪಯೋಗ ಪಡೆದುಕೊಳ್ಲಲು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು ಎಂದರು,
ಕವಿತಾ ಬೇಲೇರಿ, ವೈ. ಎಸ್​. ಬೊಮ್ಮನಾಳ, ಪಿ. ಎಸ್​. ಕರೆಕುಲದ, ಎಂ. ಎಸ್​. ಕುಚಬಾಳ, ಪಿ. ಎಚ್​. ಕೊರವರ, ಎಂ. ವಿ. ಕುಲಕಣಿರ್, ಎಂ. ಬಿ. ಹತಿರ್, ಎಂ. ಕೆ. ಬೇವಿನಕಟ್ಟಿ, ಬಸವರಾಜ ವೀರಾಪೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net