ಮಲ್ಲಿಕಾರ್ಜುನ ದೇಗುಲಕ್ಕೆ ಲಕ್ಷ ರೂ. ಡಿ.ಡಿ. ವಿತರಣೆ

RTL DD VITARANE
Published on

ರಟ್ಟಿಹಳ್ಳಿ: ತಾಲೂಕಿನ ತಿಪ್ಪಾಯಿಕೊಪ್ಪ ಬಳಿಯ ಪತ್ರಿಮರಡಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಜೀರ್ಣೆದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1 ಲಕ್ಷ ರೂ.ಗಳ ಡಿಡಿಯನ್ನು ಯೋಜನಾಧಿಕಾರಿ ಮಂಜುನಾಥ ಎಂ. ಅವರು ಶ್ರೀ ಮಹಾಂತ ಸ್ವಾಮೀಜಿ ಅವರಿಗೆ ನೀಡಿದರು.

ಈ ವೇಳೆ ಯೋಜನಾಧಿಕಾರಿ ಮಂಜುನಾಥ ಎಂ. ಮಾತನಾಡಿ, ಧರ್ಮಸ್ಥಳ ಸಂಘದಿಂದ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಅನೇಕ ದೇವಸ್ಥಾನಗಳ ಅಭಿವೃದ್ಧಿ ಸಹಾಯಧನ ವಿತರಣೆ ಮಾಡಲಾಗಿದೆ, ಮನಷ್ಯನಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುವ ದೇವಾಲಯದ ಸ್ಥಳಗಳು ನಮ್ಮ ಸಂಸ್ಕೃತಿ ಬಿಂಬಿಸುವಂತಹ ಸ್ಥಳಗಳಾಗಿವೆ ಎಂದರು.

ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಯೋಜನೆಯು ಮಹಿಳೆಯರ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ಕೇವಲ ಒಂದೆರೆಡು ಯೋಜನೆಗಳಿಗೆ ಸೀಮಿತವಾಗದೇ ಎಲ್ಲಾ ಸಮಾಜಿಕವಾಗಿ ಸೇವೆಯಲ್ಲಿ ನಿರತರಾಗಿರುವುದು ಶ್ಲಾಘನೀಯವಾಗಿದೆ ಎಂದರು.

ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಮೇಲ್ವಿಚಾರಕ ಶ್ರೀನಿವಾಸ, ಚಂದ್ರಪ್ಪ ಅಕ್ಕಿವಳ್ಳಿ, ಸೇವಾ ಪ್ರತಿನಿಧಿ ಅನುರಾಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net