ಸೂಕ್ತ ಕ್ರಮಕ್ಕೆ ಡಿಡಿ ಸೂಚನೆ

04 RTL 03
Published on

ರಟ್ಟಿಹಳ್ಳಿ: ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸಿರುವ ರ‌್ಯಾಂಪ್‌ಗಳು ಅವೈಜ್ಞಾನಿಕವಾಗಿವೆ. ಮಕ್ಕಳು ಇರಲಿ, ದೊಡ್ಡವರೂ ಹತ್ತಲು ಇಳಿಯಲು ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲ್ದರ್ತಿ ಹೇಳಿದರು.

ಪಟ್ಟಣದ ಅಂಗನವಾಡಿಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಅಂಗನವಾಡಿಗೆ ಆಗಮಿಸುವ ಮಕ್ಕಳು, ಪಾಲಕರು, ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಸಿಡಿಪಿಒ ಜಯಶ್ರೀ ಪಾಟೀಲ ಅವರಿಗೆ ಸೂಚನೆ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ದ್ರಾಕ್ಷಾಯಣಿ ಚೆನ್ನಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net