ಡಿಸಿಗಳ ನಡೆ-ಹಳ್ಳಿ ಕಡೆ ಉಡುಪಿಯಿಂದ ಆರಂಭ

Ashok
Published on

ಹಾಸನ: ಪ್ರತಿ ತಿಂಗಳು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವಂತೆ ಆದೇಶ ಹೊರಡಿಸಿದ್ದು, ‘ಡಿಸಿಗಳ ನಡೆ-ಹಳ್ಳಿ ಕಡೆ’ ಕಾರ್ಯಕ್ರಮ ಈ ವಾರದಲ್ಲಿ ಉಡುಪಿ ಜಿಲ್ಲೆಯಿಂದ ಆರಂಭವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ತಿಂಗಳಲ್ಲಿ 1 ದಿನ ಜಿಲ್ಲಾಧಿಕಾರಿ, 2 ದಿನ ಎಸಿಗಳು ಹಾಗೂ 3 ದಿನ ತಹಸೀಲ್ದಾರ್ ಹಳ್ಳಿಗಳಿಗೆ ಭೇಟಿ ನೀಡಬೇಕು. ಈ ಬಗ್ಗೆ ನಿರ್ಲಕ್ಷಿ್ಯá-ವ ಅಧಿಕಾರಿಗಳು ಮನೆಗೆ ಹೋಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಎಚ್ಚರಿಸಿದರು.

ಪೌತಿ ಖಾತೆ, ಪಹಣಿ, ಪಿಂಚಣಿ, ಶಾಲೆಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಸೇರಿ 10 ಅಂಶಗಳ ಪಟ್ಟಿ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ 3ನೇ ಶನಿವಾರ ನಡೆಸುವ ಕುರಿತು ಚರ್ಚೆ ನಡೆದಿದೆ. ಅಧಿಕಾರಿಗಳು ಸಂಜೆವರೆಗೂ ಹಳ್ಳಿಯಲ್ಲೇ ಇದ್ದು, ದಲಿತ ಕೇರಿ, ಅಂಗನವಾಡಿ ಅಥವಾ ಶಾಲೆಯಲ್ಲಿ ಬಿಸಿಯೂಟ ಮಾಡಬೇಕು. ಅಧಿಕಾರಿಗಳು ಯಾವ ಹಳ್ಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು 1 ತಿಂಗಳು ಮುಂಚೆಯೇ ಘೊಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net