

ಬೆಳಗಾವಿ: ನಗರ ಪೊಲೀಸ್ ಆಯುಕ್ತಾಲಯದ ಅಪರಾಧ ಮತ್ತು ಸಂಚಾರ ವಿಭಾಗ (ಡಿಸಿಪಿ)ದ ಪಿ.ವಿ.ಸ್ನೇಹಾ ಅವರನ್ನು ಲೋಕಾಯುಕ್ತ ಅಧೀಕ್ಷರನ್ನಾಗಿ ನೇಮಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಪಿ.ವಿ.ಸ್ನೇಹಾ ಅಪರಾಧ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ನಿರಂಜನ್ ರಾಜ್ ಅರಸ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.