ಕಚ್ಚೆ, ಕೈ, ಬಾಯಿ …ಇಚ್ಛೆಯಂತಿದ್ದರೆ …

GOVIND KARJOL
Published on

ಸಿದ್ದಾಪುರ: ಕಚ್ಚೆ, ಕೈ,ಬಾಯಿ ಇಚ್ಛೆಯಂತಿದ್ದರೆ, ವಿಷ್ಣು ಬ್ರಹ್ಮನಂತೆ ಚಿಂತೆ ಇಲ್ಲದೆ ಬಾಳುವನು ಸರ್ವಜ್ಞ... ಎಂಬ ವಚನ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅನ್ವಯವಾಗುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 59 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದರೆ ಕಾರಜೋಳ ಅವರು ಕಾಗೇರಿಯವರ ವ್ಯಕ್ತಿತ್ವವನ್ನು ಬಣ್ಣಿಸುವಲ್ಲಿ ಈ ಮಾತುಗಳನ್ನು ಹೇಳಿದ್ದರೂ ಪ್ರಸ್ತುತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net