ಸಣಾಪುರ ಕಾಯ್ದಿಟ್ಟ ಅರಣ್ಯ ಪಾರ್ಕ್​ಗೆ ಸೇರಿಸಿ, ಡಿಸಿಎ್​ ಕಾವ್ಯ ಚತುರ್ವೇದಿ ಸೂಚನೆ

dcf koppal forest tree park kavya chaturvedi
Published on

ಕೊಪ್ಪಳ: ಗಂಗಾವತಿ ತಾಲೂಕಿನ ಸಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ವಿರುಪಾಪುರ ಗಡ್ಡಿ ಟ್ರೀ ಪಾರ್ಕ್​ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಹೇಳಿದರು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ವಿರುಪಾಪುರಗಡ್ಡಿ ತುಂಗಭದ್ರಾ ನದಿಯಿಂದ ಸುತ್ತುವರೆದಿದೆ. ಐತಿಹಾಸಿಕ, ಪೌರಾಣಿಕ ಸ್ಮಾರಕಗಳು ಇವೆ. ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವುದರಿಂದ ಪಾರ್ಕ್​ ನಿರ್ಮಾಣಕ್ಕೆ ಇಲಾಖೆ ಯೋಜಿಸಿದೆ. 2016&17ರಲ್ಲಿ ಆರಂಭಿಸಲಾಗಿದ್ದು, ಪಾರ್ಕ್​ ಸುತ್ತಲೂ ಚೈನ್​ಲಿಂಕ್​ ಮೆಸ್​ ಫೆನ್ಸಿಂಗ್​, ಸ್ವಾಗತ ಗೋಪುರ, ಟಿಕೆಟ್​ ಕೌಂಟರ್​, ಅರಣ್ಯ ಮಾಹಿತಿ ಕೇಂದ್ರ, ಶೌಚಗೃಹ, ವಾಕಿಂಗ್​ ಪಾತ್​ ಮತ್ತಿತರ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಉದ್ಯಾನ ಶ್ರೀ ಲೋಕಾರ್ಪಣೆ ಆಗಲಿದೆ ಎಂದರು.

ವಿರುಪಾಪುರಗಡ್ಡಿಗೆ ಹೊಂದಿಕೊಂಡಿರುವ ಸಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದವನ್ನು ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ವ್ಯಾಪ್ತಿಗೆ ಸೇರಿಸಬೇಕು. ಕೊರೆಕಲ್​ ರೈಡ್​ ಪ್ರಾರಂಭಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯಬಹುದು. ಅಗತ್ಯ ಪಾರ್ಕಿಂಗ್​, ಕ್ಯಾಂಟಿನ್​ ಇತರ ಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ. ಸರ್ಕಾರದಿಂದ ಅನುಮೋಧನೆ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ಗಂಗಾವತಿ ವಲಯ ಅರಣ್ಯ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ ಮಾತನಾಡಿ, ಸಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ. 1& 13 ರಲ್ಲಿ ಕೆರೆ ಪ್ರದೇಶ ಭಾಗಶ@ ಅರಣ್ಯದ ಬ್ಲಾಕ್​-2 ಗೆ ಸೇರಿದೆ. ಕೆರೆಯಲ್ಲಿ ಮೀನುಗಾರರ ಕುಟುಂಬಗಳು ಸಾಂಪ್ರದಾಯಿಕ ಹರಿಗೋಲು ನಾವಿಕರು ಪ್ರವಾಸಿಗರನ್ನು ಹರಿಗೋಲಿನಲ್ಲಿ ಕರೆದೊಯ್ಯುತ್ತಾರೆ. ಅದನ್ನು ಮುಂದುವರೆಸಲು ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಕೆರೆಯನ್ನು ಉದ್ಯಾನ ವ್ಯಾಪ್ತಿಗೆ ಸೇರಿಸಿಕೊಂಡಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲ. ಹರಿಗೋಲು ಚಾಲಕರಿಗೆ ಸ್ಥಳಿಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೊರೆಕಲ್​ ರೈಡ್​ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೆರೆಯಲ್ಲಿ ಹರಿಗೋಲು ಹಾಕಲು ಸುರಕ್ಷತಾ ದೃಷ್ಟಿಯಿಂದ ಪರಿಶೀಲನೆ ಅಗತ್ಯ. ಈ ಬಗ್ಗೆ ರಾಷ್ಟ್ರ ಅಥವಾ ರಾಜ್ಯ ವಿಪತ್ತು ಸ್ಪಂದನ ಪಡೆಯಿಂದ ವರದಿ ಪಡೆಯಲಾಗುವುದು. ಹರಿಗೋಲು ಚಾಲಕರಿಗೆ ಅಗತ್ಯ ತರಬೇತಿ, ಚಾಲನಾ ಪರವಾನಗಿ, ಅರ್ಹತೆ ಪ್ರಮಾಣ ಪತ್ರ ವಿತರಿಸಲಾಗುವುದು. ಹರಿಗೋಲು ಚಾಲನೆಗೆ ಸ್ಥಳಿಯರಿಗೆ ಆದ್ಯತೆ ನೀಡಿ ಕ್ಯಾಂಟೀನ್​, ಪಾರ್ಕಿಂಗ್​ ಇತರ ಕಾಮಗಾರಿಗಳಿಗೆ ಟೆಂಡರ್​ ಆಹ್ವಾನಿಸಲಾಗುವುದೆಂದು ಮಾಹಿತಿ ನೀಡಿದರು.

ವಿರುಪಾಪುರ ಗಡ್ಡಿ ಸಾಲುಮರದ ತಿಮ್ಮಕ್ಕ ವೃೊದ್ಯಾನ ಸಮಿತಿ ರಚಿಸಲಾಯಿತು. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ್​ ಬಸಿಯಾ, ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ಡೀನ್​ ಡಾ.ತಮ್ಮಯ್ಯ ಎನ್​., ಗಂಗಾವತಿ ಗ್ರಾಮೀಣ ಪೊಲೀಸ್​ ಠಾಣೆಯ ಜಿ.ಕಲಾ, ಶಾಲಾ ಶಿಕ್ಷಣ ಇಲಾಖೆಯ ಅಂಜನಪ್ಪ, ಪಿಯು ಇಲಾಖೆ ತುಳಸಿ ಬೆಲ್ಲದ್​, ಅರಣ್ಯ ಇಲಾಖೆಯ ಶಮಶುನ್ನಿಸ್ಸಾ, ನಿಸ್ಸಾರ ಅಹ್ಮದ್​, ಚಂದ್ರಶೇಖರ ರಾಥೋಡ್​, ಮುತ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net