ಪರಿಸರ ಸಂರಕ್ಷಣೆ ಎಲ್ಲರ ಹೊಣೆ, ವನ್ಯಜೀವಿ ಸಪ್ತಾಹಕ್ಕೆ ಶಾಸಕ ಚಾಲನೆ

IMG_20221003_091501 (1)44
Published on

ಚಿತ್ರದುರ್ಗ: ಪರಿಸರ ಸಮತೋಲನೆಗಾಗಿ ವನ್ಯಜೀವಿಗಳ ಸಂರಕ್ಷಣೆಗೆ ಕಾರ್ಯ ಪ್ರವೃತ್ತರಾಗೋಣವೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಾಗರಿಕರಿಗೆ ಮನವಿ ಮಾಡಿದರು.

ಅರಣ್ಯಇಲಾಖೆ ಜಟ್‌ಪಟ್ ನಗರದ ರಾಜೇಂದ್ರ ಉದ್ಯಾನದಲ್ಲಿ ಸೋಮವಾರ ಏರ್ಪಡಿಸಿದ್ದ 68ನೇ ವನ್ಯಜೀವಿ ಸಪ್ತಾಹ-2022ಕ್ಕೆ ಚಾಲನೆ ನೀಡಿ ಮಾತನಾಡಿ,ವನ್ಯಜೀವಿಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಅತಿ ಮುಖ್ಯಪಾತ್ರವನ್ನು ವಹಿಸುತ್ತವೆ. ಅರಣ್ಯಕ್ಕೆ ನಾವು ಮಾಡುವ ಯಾವುದೇ ಹಾನಿ,ಇಡೀ ಪರಿಸರದ ವ್ಯವಸ್ಥೆಗೆ ಅಪಾಯವನ್ನು ಸೃಷ್ಟಿಸುತ್ತದೆ.

ಆದ್ದರಿಂದ ಅರಣ್ಯ,ಪ್ರಾಣಿ,ಪಕ್ಷಿಗಳ ರಕ್ಷಣೆ ಎಲ್ಲ ಹೊಣೆಯಾಗಿದೆ. ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿಗೆ ಪ್ರಯತ್ನಿಸುತ್ತಿದೆ. ನಗರದ ಉದ್ಯಾನಗಳ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ ಭರಿಸಲಾಗಿದೆ. ಸಸಿ ನೆಡಲು ಅರಣ್ಯ ಇಲಾಖೆಗೆ 3 ಕೋಟಿ ರೂ. ಮಂಜೂರು ಮಾಡಿರುವುದಾಗಿ ತಿಳಿಸಿದರು.

ಡಿಸಿಎಫ್ ಟಿ.ರಾಜಣ್ಣ ಮಾತನಾಡಿ,ಭಾರತ ವನ್ಯಜೀವಿ-ವನ ಸಂರಕ್ಷಣೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. 1952ರಿಂದ ಸಪ್ತಾಹವನ್ನು ಆಚರಿಸ ಲಾಗುತ್ತಿದೆ. 8ರವರೆಗೆ ನಾನಾ ಕಾರ‌್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ನಗರಸಭೆ ಸದಸ್ಯ ಶ್ರೀನಿವಾಸ್,ಮಾಜಿ ಸದಸ್ಯ ಮಹೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್,ವಲಯ ಅರಣ್ಯಾಧಿಕಾರಿ ಸಂದೀಪ್‌ನಾಯಕ್,ಉಪ ವಲಯ ಅರಣ್ಯಧಿಕಾರಿಗಳಾದ ರುದ್ರಮುನಿ,ರವಿ ಹಾಗೂ ರವಿಕುಮಾರ್,ರಮೇಶ್,ಕ್ಯಾತಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net