

- ಧಾರವಾಡಹೈಕೋರ್ಟ್ ಮಧ್ಯಂತರ ಆದೇಶ
ಬೆಳಗಾವಿ;ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘವನ್ನು ಪ್ರತಿನಿಧಿಸುವ ಸದಸ್ಯನ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಿರುವ ಹಿನ್ನೆಲೆಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ನ ಹುಕ್ಕೇರಿ ತಾಲೂಕು ಕ್ಷೇತ್ರದ ಚುನಾವಣೆ ಮುಂದೂಡಿ ಧಾರವಾಡ ಹೈ ಕೋಟ್೯- ಆದೇಶ ಹೊರಡಿಸಿದೆ.
ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘವನ್ನು ಪ್ರತಿನಿಧಿಸುವ ಸದಸ್ಯನ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಿರುವುದನ್ನು ಪ್ರಶ್ನಿಸಿ ಶ್ರೀ ಭೀಮಸೇನ್ ಬಾಲಪ್ಪ ಬಾಗಿ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು.
ನ್ಯಾಯಾಲಯವು ಅರ್ಜಿದಾರ ಮತ್ತು ಪ್ರತಿವಾದಿಗಳ ವಾದಗಳನ್ನು ಮುಂದಿನ ದಿನ ವಿಚಾರಣೆಗಾಗಿ ನಿಗದಿಪಡಿಸಿ, “ಹುಕ್ಕೇರಿ ತಾಲೂಕು ಅಥವಾ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಸಂಬಂಧಿಸಿದ ಚುನಾವಣೆಯನ್ನು ಮಾತ್ರ ಮುಂದೂಡಬೇಕು” ಎಂದು ಮಧ್ಯಂತರ ಆದೇಶ ನೀಡಿತು.
ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 28 ಕ್ಕೆ ಮುಂದೂಡಿ ಎಂದು ಕೋರ್ಟ್ ಆದೇಶಿಸಿದೆ.
ಸರ್ಕಾರದ ವಕೀಲ ರಾಮೇಶ್ ಬಿ. ಚಿಗಾರಿ ಅವರು ಉಪ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ಸಹಕಾರ ನೊಂದಾಯಕರಿಗೆ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಂ ಹುಳಿಗೋಳ ವಾದಿಸಿದರರು.