

ಬೆಳಗಾವಿ;ಪ್ರಾಥಮಿಕ ಕಲಿಕಾ ಹಂತದಲ್ಲೇ ಐಎಎಸ್, ಐಪಿಎಸ್ ಅಧಿಕಾರಿಯಾಗಲು ಸಂಕಲ್ಪ ಮಾಡಬೇಕು.ಅದಕ್ಕೆ ಪೂರಕವಾಗಿ ಅಧ್ಯಯನ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಿಹಮ್ಮದ ರೋಷನ್ ಹೇಳಿದರು.
ಖಾನಾಪುರದ ಮಳೆ ಹಾನಿ ಪರಿಶೀಲನೆ ನಡುವೆಯೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಜಿಪಂ ಸಿಇಒ ರಾಹುಲ ಶಿಂಧೆ ಮಕ್ಕಳೊಂದಿಗೆ ಚರ್ಚಿಸಿದರು.
ಉತ್ಸಾಹಿ ಯುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೋಡಿದ ಮಕ್ಕಳು ಅವರತ್ತ ಹೋದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಸಿ ಹಾಗೂ ಎಸ್ಪಿ ಮಕ್ಕಳಿಗೆ ಚನ್ನಾಗಿ ಅಭ್ಯಾಸ ಮಾಡಿ ಮುಂದೆ ದೊಡ್ಡ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯಾಗಿ ಎಂದು ಪ್ರೋತ್ಸಾಹ ನೀಡಿದ್ದು ಮಕ್ಕಳ ಖುಷಿಗೆ ಪಾರವೆ ಇರಲಿಲ್ಲ.