

ಬೆಳಗಾವಿ: ಭಾತಕಾಂಡೆ ಸ್ಪೋಟ್೯ ಆಕ್ಯಾಡೆಮಿ ಹಾಗೂ ಬೆಳಗಾವಿ ಜಿಲ್ಲೆ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಡಾ. ಸತೀಶ್ ಜಾರಕಿಹೊಳಿ ಆಲ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಿಮಿತ್ತ ಮಂಗಳವಾರ ಟೀ ಶಟ್೯ ಲೋಕಾರ್ಪಣೆ ಗೊಳಿಸಲಾಯಿತು.
ಮೇ.2 ರಂದು ಸರದಾರ್ಸ್ ಮೈದಾನದ ಆವರಣದಲ್ಲಿ ಡಾ. ಸತೀಶ್ ಜಾರಕಿಹೊಳಿ ಆಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜಿಸಲಾಗಿದೆ. ಪೈನಲ್ ವಿಜೇತರಿಗೆ 3 ಲಕ್ಷ 50 ಸಾವಿರ ನಗದು ಹಾಗೂ ಟ್ರೋಫಿ, ರನರ್ ಅಪ್ ಗೆ 2 ಲಕ್ಷ ರೂ. ನಗದು ಹಾಗೂ ಟ್ರೋಫಿ, ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸಮನ್, ಅತ್ಯುತ್ತಮ ಬಾಲರ್ ಪ್ರಶಸ್ತಿಯೂ ಇರುತ್ತದೆ ಎಂದರು.
ಕರ್ನಾಟಕದಿಂದ ಒಟ್ಟು 40 ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಇದು 10 ದಿನಗಳ ಕಾಲ ನಾಕೌಟ್ ಪಂದ್ಯಾವಳಿ ನಡೆಯಲಿವೆ ಎಂದರು. ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ.